ಚಾರಣ ಸವಿ ಹೂರಣ

ಚಾರಣ ಸವಿ ಹೂರಣ


Unabridged

Sale price $3.90 Regular price$5.99
Save 35.0%
Quantity:
Add to wishlist
  • Cancel anytime!
  • Memberships will renew every month
  • One credit every month on renewal
  • You can spend 1 credit every month to get an audiobook
window.theme = window.theme || {}; window.theme.preorder_products_on_page = window.theme.preorder_products_on_page || [];

ಇದೊಂದು ಜೋಕು. 1953 ಮೇ. 29ರಂದು ಯಶಸ್ವಿಯಾಗಿ ಎವರೆಸ್ಟ್ ಶಿಖರವನ್ನು ಮೊದಲ ಬಾರಿಗೆ ಹತ್ತಿ 'ಉಘೇ 'ಎಂದವರು ಎಡ್ಮಂಡ್ ಹಿಲರಿ ಮತ್ತು ತೇನ್ ಸಿಂಗ್ ನಾರ್ಕೆ, ಅವರಿಗೊಂದು ಧ್ವನಿ ಕೇಳಿ ಬಂತು. 'ಗರಂ ಚಾಯ್'.. ಗರಂ ಚಾಯ್..' ಕಾಕ ಹೋಟೆಲ್ನ ಹುಡುಗನೊಬ್ಬ ಅಲ್ಲಿ ಟೀ ಮಾರುತ್ತಿದ್ದನಂತೆ !

ಹಿಮಾಲಯ ಪರ್ವತ ಶ್ರೇಣಿಯಲ್ಲಿ ಅತಿ ಎತ್ತರದಲ್ಲಿ ಇರುವ ಅನೇಕ ದೇವಾಲಯಗಳನ್ನು ನೋಡಿದಾಗ ಈ ಘಟನೆ ನೆನಪಾಗುತ್ತದೆ. ನಾವು ಬೆಟ್ಟ ಹತ್ತಿ ದೇವರನ್ನು ನೋಡುವುದೇ ಕಷ್ಟ ಇರುವಾಗ ಗುಡಿಗಳನ್ನು ಬಹು ಹಿಂದೆ ನಿರ್ಮಿಸಿದವರ ಬಗ್ಗೆ ಹೆಮ್ಮೆ ಅನಿಸುತ್ತದೆ. ಹೆಚ್.ಎಲ್. ಗುರುಪ್ರಸಾದ್ ಅವರು ಚರಣವನ್ನು ಚಾರಣಕ್ಕೆ ಬಳಸಿಕೊಂಡು ಆ ಅನುಭವಗಳ ಹೂರಣ ನಮಗೆ ನೀಡಿದ್ದಾರೆ. ಬ್ಯಾಂಕ್ ವೃತ್ತಿಯಿಂದ ನಿವೃತ್ತರಾದ ಮೇಲೆ ಪಾರ್ಕುಗಳಲ್ಲಿ ವಾಕಿಂಗ್ ಮಾಡುವುದೇ ಕಷ್ಟಕರ. ಗುಂಡಿ ಬಿದ್ದ ರಸ್ತೆಗಳಲ್ಲಿ ದಂಡಿಯಾಗಿ ಜಾರು ನೆಲವಿರುವಾಗ ನಡೆದಾಡುವುದೂ ಕಷ್ಟ. ಆದರೆ ಗುರುಪ್ರಸಾದ್ ನಿವೃತ್ತಿಯಾದ ಮೇಲೆ ನೆಲದ ಮೇಲೆ ನಡೆಯುವುದಕ್ಕಿಂತ ಪರ್ವತ ಶ್ರೇಣಿಗಳಲ್ಲಿ ನಡೆದಿರುವುದೇ ಹೆಚ್ಚು. ಹಿಮಾಲಯ ಶ್ರೇಣಿಯಲ್ಲಿ ನಾವು ಮಾಡುವ ಧಾರ್ಮಿಕ ಚಾರಣಕ್ಕಿಂತ ಮಿಗಿಲಾದ ಚಾರಣ ಈ ಜಗತ್ತಿನಲ್ಲೇ ಬೇರಾವುದೂ ಇಲ್ಲ ಎಂದು ಹೆಮ್ಮೆಯಿಂದ ಅವರು ಹೇಳುತ್ತಾರೆ.

ಚಾರಣವು ಆತ್ಮಸ್ಥೆರ್ಯ ನೀಡುತ್ತದೆ, ನಾಯಕತ್ವ ಬೆಳೆಸುತ್ತದೆ. ಪ್ರಕೃತಿಯ ಚೆಲುವನ್ನು ಹತ್ತಿರದಿಂದ ಸವಿಯಲು ಅವಕಾಶ ನೀಡುತ್ತದೆ. ಎತ್ತರದ ಪರ್ವತದ ಮೇಲಿರುವ ದೇವಾಲಯ ತಲುಪಿ ಅಪರಿಮಿತ ಆನಂದದಿಂದ ದೇವರಿಗೆ ಕೈ ಮುಗಿದಾಗ ಕಾಲಿನ ದಣಿವು ಮಾಯವಾಗುತ್ತದೆ. ಅಲ್ಲಿಗೆ ಕರೆತಂದ ಕಾಲುಗಳನ್ನೇ ಮರೆಯುತ್ತೇವೆ. ಇದು ಚಾರಣಲೋಕದ ವಿಸ್ಮಯ. ಇಲ್ಲಿನ ಪ್ರತಿ ಘಟನೆಯೂ ರೋಮಾಂಚನಕಾರಿ, ಓದುಗರಿಗೆ ಇದು 'ಚಾರಣ ಗೈಡ್'!