{"product_id":"book-jyv8","title":"ಮುಚ್ಚಿದ ಬಾಗಿಲು - ತ್ರಿವೇಣಿ  Mucchida Bagilu by TRIVENI","description":"\u003cp\u003e\u003cstrong\u003e\u003cu\u003eಮುಚ್ಚಿದ ಬಾಗಿಲು - ತ್ರಿವೇಣಿ\u003c\/u\u003e\u003c\/strong\u003e\u003c\/p\u003e\u003cp\u003eಭವ್ಯವಾದ ಕಲ್ಲು ಕಟ್ಟಡ ಮಹಾ ಮೌನಿಯೊಬ್ಬ ಗಂಭೀರವಾಗಿ ನಿಂತು ತಪಸ್ಸು ಮಾಡುತ್ತಿರುವಂತೆ ಕಾಣುತ್ತಿತ್ತು.\u003c\/p\u003e\u003cp\u003eಈ ಕಲ್ಲು ಕಟ್ಟಡದ ಒಳಗೆ ಎಷ್ಟು ಜನರ ಆಸೆ ಆಕಾಂಕ್ಷೆಗಳು ಬೂದಿಯಾಗಿ ಭವಿಷ್ಯ ಹಾಳಾಗಿದೆಯೋ? ಎಷ್ಟು ಜನರು ಆಸೆಯ ಹೊಂಬೆಳಕನ್ನು ಕಾಣಲು ಆತುರರಾಗಿರುವರೋ?\u003c\/p\u003e\u003cp\u003eನಾನು ಕಬ್ಬಿಣದ ಬಾಗಿಲನ್ನು ದಾಟಿ ಹೊರಗೆ ಬಂದೆ. ನನ್ನ ಹಿಂದೆಯೇ ಬಾಗಿಲು ಮುಚ್ಚಿಕೊಂಡಿತು. ದಪ್ಪನಾದ ಬೀಗವೊಂದು ಚಿಲಕಕ್ಕೆ ಬಿತ್ತು.\u003c\/p\u003e\u003cp\u003eಇಲ್ಲಿ ನಗುವೇ ಅಳುವಾಗುತ್ತಿತ್ತು. ಅಳು ನಗುವಾಗುತ್ತಿತ್ತು. ಹಾಡು, ಮಾತು, ಹರಟೆ, ಹೊಡೆದಾಟ, ನೆಗೆದಾಟ, ಕಿರಿಚಾಟ ಯಾವುದಕ್ಕೂ ಇಲ್ಲಿ ಅಭಾವವಿರಲಿಲ್ಲ.\u003c\/p\u003e\u003cp\u003eರೋಗಿಯ ನಗುವನ್ನು ನೋಡುತ್ತಿದ್ದಂತೆ ನಮಗೆ ಕಣ್ಣಿನಲ್ಲಿ ನೀರು ಬರುವಂತಾಗುತ್ತಿತ್ತು. ಆದರೆ ನಮಗೂ ಅವರಿಗೂ ಏನು ವ್ಯತ್ಯಾಸ?\u003c\/p\u003e\u003cp\u003eನಮ್ಮ ಮನದ ಬಾಗಿಲು ಯಾವಾಗಲೂ ಮುಚ್ಚಿರುತ್ತದೆ. ಆದುದರಿಂದ ಹೊರಗಿನವರಿಗೆ ನಾವು ನಯವಾಗಿ, ನಾಗರೀಕರಾಗಿ ಕಾಣುತ್ತೇವೆ.\u003c\/p\u003e\u003cp\u003eಮನಸ್ಸಿನಲ್ಲಿ ಅಸಭ್ಯತೆಯಿದ್ದರೂ, ನಾಲಿಗೆ ಸಭ್ಯತನದ ಮಾತುಗಳನ್ನಾಡುತ್ತದೆ. ಮುಚ್ಚಿದ ಬಾಗಿಲು ತೆಗೆದುಕೊಂಡರೆ?\u003c\/p\u003e\u003cp\u003eಆಗ ಮನಸ್ಸಿನ ಹುಳುಕು, ಅಸಭ್ಯತನ, ಕೊಳೆ, ಹೊರಗಿನವರಿಗೆ ಗೋಚರವಾಗುತ್ತದೆ.\u003c\/p\u003e\u003cp\u003eಒಂದು ವಿಧದಲ್ಲಿ ನಮಗಿಂತಲೂ, ಮಾನಸಿಕ ರೋಗಗಳಿಂದ ನರಳುವವರೇ ನಿಷ್ಕಪಟಿಗಳು. ನಾವು ಎಲ್ಲವನ್ನೂ ಮುಚ್ಚಿಡುತ್ತೇವೆ. ಅವರು ಮನಸ್ಸಿಗೆ ಬಂದುದನ್ನು ಬಾಯಲ್ಲಿ ಆಡಿ ತೋರಿಸಿ 'ಹುಚ್ಚರು' ಎಂದೆನಿಸಿಕೊಳ್ಳುತ್ತಾರೆ.\u003c\/p\u003e\u003cbr\u003e\u003cp\u003eTriveni ತ್ರಿವೇಣಿ\u003c\/p\u003e\u003cp\u003eTriveni Shankar Sahitya Prathisthana(R) ತ್ರಿವೇಣಿ ಶಂಕರ್ ಸಾಹಿತ್ಯ ಪ್ರತಿಷ್ಠಾನ(ರಿ)\u003c\/p\u003e","brand":"INAudio","offers":[{"title":"Audiobook","offer_id":49409850114352,"sku":"BDjyv8","price":16.0,"currency_code":"USD","in_stock":true}],"thumbnail_url":"\/\/cdn.shopify.com\/s\/files\/1\/0879\/2784\/9264\/files\/jyv8-Square-cover.jpg?v=1773621196","url":"https:\/\/downpour.com\/products\/book-jyv8","provider":"Downpour","version":"1.0","type":"link"}