{"product_id":"book-iouk","title":"ತಾವರೆಯ ಕೊಳ - ತ್ರಿವೇಣಿ Tavareya Kola By TRIVENI","description":"\u003cp\u003eಒಂದೆರಡು ಬಂಡೆಗಳನ್ನು ದಾಟಿದಂತೆ ರಮೇಶ ಅವಳ ಸಮೀಪಕ್ಕೆ ಮತ್ತಷ್ಟು ಸರಿದು ರತ್ನಳನ್ನು ತನ್ನ ತೋಳಿನೊಳಗೆ ಸೆಳೆದುಕೊಂಡ. ನಡೆಯುತ್ತಿದ್ದ ರತ್ನ ತಟ್ಟನೆ ನಿಂತಳು.\u003c\/p\u003e\u003cp\u003e‘ರಮೇಶ, ನನ್ನನ್ನು ಪರೀಕ್ಷಿಸಬೇಡಿ. ನಿಮಿಷ ನಿಮಿಷಕ್ಕೂ ಹೀಗೆ ನನ್ನನ್ನು ಆಸೆಯ ಬಲೆಗೆ ಒಡ್ಡಬೇಡಿ. ನಾನೂ ಮನುಷ್ಯಳು, ದುರ್ಬಲಳು’\u003c\/p\u003e\u003cp\u003eಮುಳುಗುತ್ತಿರುವ ಆರ್ತನಾದದಂತೆ ಬಂದಿತು ರತ್ನಳ ಮಾತು.\u003c\/p\u003e\u003cp\u003e‘ಇಲ್ಲ ರತ್ನ, ನಾನು ನಿಮ್ಮನ್ನು ಪರೀಕ್ಷಿಸುತ್ತಿಲ್ಲ. ಎಂತಹ ಅಗ್ನಿ ಪರೀಕ್ಷೆಯಲ್ಲಿಯೂ ಗೆಲುವು ನಿಮ್ಮದು ಎಂದು ನಾನು ತಿಳಿದಿದ್ದೇನೆ. ಆದರೆ ನನಗೊಂದು ಸಿಹಿ ನೆನಪು ಬೇಕು’\u003c\/p\u003e\u003cp\u003e‘ನೆನಪು! ನನ್ನ ಸ್ನೇಹವೇ ನಿಮಗೊಂದು ಕೆಟ್ಟ ಕನಸಾಗಿರುವಾಗ ಸಿಹಿ ನೆನಪು ಎಲ್ಲಿಂದ ಬರಬೇಕು?’\u003c\/p\u003e\u003cp\u003e‘ನಾವು ಸಿಹಿ ಎಂದುಕೊಂಡಿದ್ದು ಸಿಹಿಯಾಗುತ್ತದೆ’\u003c\/p\u003e\u003cp\u003eಸಮುದ್ರ ನಿರ್ಜನವಾದ ಮರುಳುಕಾಡಿನಂತಿತ್ತು. ಕತ್ತಲಾದುದರಿಂದ ಬಹು ಜನರು ಸಮುದ್ರದ ದಂಡೆಯನ್ನು ತೊರೆದು ಬೆಳಕಿನತ್ತ ಹೊರಟು ಹೋಗಿದ್ದರು.\u003c\/p\u003e\u003cp\u003eರಮೇಶ ರತ್ನಳ ಮುಖವನ್ನು ತನ್ನ ಬೊಗಸೆಯಲ್ಲಿ ಹಿಡಿದು ಮೇಲೆತ್ತಿ ತನ್ನ ಸುಡುತ್ತಿದ್ದ ತುಟಿಗಳನ್ನು ಅವಳ ತಂಪಾದ ತುಟಿಗಳ ಮೇಲೆ ಒತ್ತಿದ.\u003c\/p\u003e\u003cp\u003eಅವನ ಪ್ರೇಮಮುದ್ರೆಗೆ ಆಕಾಶದಲ್ಲಿನ ಅಸಂಖ್ಯಾತ ತಾರೆಗಳು, ಪಕ್ಕದಲ್ಲಿದ್ದ ಅಗಾಧ ಜಲರಾಶಿ ಸಾಕ್ಷಿಗಳಾಗಿದ್ದವು.\u003c\/p\u003e\u003cp\u003eರತ್ನ ಅವನ ತೋಳಿನಲ್ಲಿ ಪ್ರತಿಮೆಯಂತೆ ನಿಂತಿದ್ದಳು. ಬಹುದಿನಗಳಿಂದ ಬಾಯಾರಿದ ಮರಳು ಕಾಡಿನ ಪ್ರಯಾಣಿಕ ನೀರನ್ನು ಕಂಡುಕೂಡಲೇ ತೃಪ್ತಿಯಾಗುವವರೆಗೆ ನೀರನ್ನು ಹೀರುವಂತೆ, ರಮೇಶ ರತ್ನಳ ಪ್ರೇಮಾಮೃತವನ್ನು ಹೀರಿ ತಣಿಯದಾದ.\u003c\/p\u003e","brand":"Findaway World, LLC","offers":[{"title":"Audiobook","offer_id":49403500233008,"sku":"BDiouk","price":15.0,"currency_code":"USD","in_stock":true}],"thumbnail_url":"\/\/cdn.shopify.com\/s\/files\/1\/0879\/2784\/9264\/files\/535533-iouk-Square.jpg?v=1735646133","url":"https:\/\/downpour.com\/products\/book-iouk","provider":"Downpour","version":"1.0","type":"link"}